`ಪಾರ್ವತಿಪುರ ಪ್ರಾರಂಭ`
Posted date: 29/June/2011

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಪಾರ್ವತಿಪುರ ಚಿತ್ರ ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು.
ನಾಯಕ ರಾಮಪ್ರಸಾದ್ ಹಾಗೂ ನಾಯಕಿ ನವ್ಯಾ ಅಭಿನಯಿಸಿದ ಪ್ರಥಮ ಸನ್ನಿವೇಶಕ್ಕೆ ನಟ ಕುಮಾರ್ ಗೋವಿಂದು ಅವರು ಆರಂಭ ಫಲಕ ತೋರಿದರು. ಶಾಸಕ ನೆ.ಲ.ನರೇಂದ್ರಬಾಬು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಟ ಕುಣಿಗಲ್ ನಾಗಭೂಷಣ್ ಮೊದಲ ಸನ್ನಿವೇಶವನ್ನು ನಿರ್ದೇಶಿಸಿದರು.
ರಾಮಪ್ರಸಾದ್ ಈ ಚಿತ್ರದ ನಿರ್ದೇಶಕ ಕೂಡ. ಐದು ಹಾಡುಗಳು, ಐದು ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಕುದುರೆಮುಖ, ನಾಗರಹೊಳೆ ಮುಂತಾದಕಡೆ ನಲವತ್ತೈದು ದಿನಗಳ ಕಾಲ ನಡೆಯಲಿದೆ.
ಥಾಮಸ್ ರತ್ನಂ ಸಂಗೀತವಿರುವ ಈ ಚಿತ್ರಕ್ಕೆ ಸಿ.ನಾರಾಯಣ್ ಅವರ ಛಾಯಾಗ್ರಹಣವಿದೆ. ಎ.ಹರ್ಷ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಮಪ್ರಸಾದ್, ನವ್ಯಾ, ಡಾಲಿ, ಅವಿನಾಶ್, ಸುಚೀಂದ್ರ ಪ್ರಸಾದ್, ಧರ್ಮ, ರೇಖಾ.ವಿ.ಕುಮಾರ್, ತ್ರಿವೇಣಿ, ಎ.ಆರ್.ಬಾಬು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed